ಸೇನೆಯ ಅಲ್ಪಾವಧಿ ನೇಮಕಾತಿ ಯೋಜನೆ ಅಗ್ನಿಪಥ್ ಯೋಜನೆಯನ್ನ ಕೇಂದ್ರ ಸರ್ಕಾರ ಘೋಷಿಸಿದ ಕೆಲವೇ ಹೊತ್ತಲ್ಲಿ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ನಟಿ ಕಂಗನಾ ರನೌತ್ ಯೋಜನೆಗೆ ತಮ್ಮ ಬೆಂಬಲವನ್ನ ಸೂಚಿಸಿದ್ದಾರೆ. ಈ ಕುರಿತು ಕಂಗನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘವಾಗಿ ಬರೆದುಕೊಂಡಿದ್ದು ಕೇಂದ್ರ ಸರ್ಕಾರದ ನೂತನ ಯೋಜನೆಯನ್ನ ಹಾಡಿ ಹೊಗಳಿದ್ದಾರೆ ಮತ್ತು ಬೇರೆ ದೇಶಗಳಲ್ಲಿ ಸೇನೆ ತರಬೇತಿ ಕಡ್ಡಾಯ ಮಾಡಲಾಗಿದೆ ಎಂದು ಹೇಳಿದ್ದಾರೆ. ಇಸ್ರೇಲ್ನಂತಹ ರಾಷ್ಟ್ರಗಳಲ್ಲಿ ಸೇನಾ ತರಬೇತಿಯನ್ನ