ಚೆನ್ನೈ: ಡಿಎಂಕೆ ಮುಖ್ಯಸ್ಥ, ತಮಿಳುನಾಡು ಮಾಜಿ ಸಿಎಂ ಎಂ ಕರುಣಾನಿಧಿ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ತಮಿಳುನಾಡಿನಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಡಿಎಂಕೆ ಮುಖ್ಯಸ್ಥನ ಆರೋಗ್ಯ ಸ್ಥಿತಿ ನಿನ್ನೆ ರಾತ್ರಿಯಿಂದ ತೀವ್ರ ಉಲ್ಬಣಗೊಂಡಿದ್ದು, ಪುತ್ರ ಎಂಕೆ ಸ್ಟಾಲಿನ್, ಪುತ್ರಿ ಕನಿಮೊಳಿ ಸೇರಿದಂತೆ ಕುಟುಂಬ ವರ್ಗವೇ ಅಲ್ಲಿ ನೆರೆದಿದೆ. ಜತೆಗೆ ಆಸ್ಪತ್ರೆಯ ಸುತ್ತಮುತ್ತ ಸಾವಿರಾರು ಮಂದಿ ಅಭಿಮಾನಿಗಳೂ ಸೇರಿದ್ದಾರೆ.ಇಂದು ಮಧ್ಯಾಹ್ನ ಸ್ಟಾಲಿನ್ ಮತ್ತು ಕುಟುಂಬ