ನವದೆಹಲಿ: ಬಿಜೆಪಿ ಮತ್ತು ಪಿಡಿಪಿ ಮೈತ್ರಿ ಕೂಟದ ಜಮ್ಮು ಕಾಶ್ಮೀರ ಸರ್ಕಾರದ ಸಂಪುಟ ಪುನರಾಚನೆ ಬಳಿಕ ಉಪ ಮುಖ್ಯಮಂತ್ರಿಯಾಗಿ ನೇಮಕಗೊಂಡ ಕವಿಂದರ್ ಗುಪ್ತಾ ಕತುವಾ ಅತ್ಯಾಚಾರ ಪ್ರಕರಣದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಇದೊಂದು ಸಣ್ಣ ವಿಚಾರ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕಿದೆ. ಆ ಹುಡುಗಿಗೆ ನ್ಯಾಯ ಸಿಗಬೇಕು. ನಾವು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಿದೆ. ಇಂತಹದ್ದಕ್ಕೆಲ್ಲಾ ಹೆಚ್ಚಿನ ಮನ್ನಣೆ ನೀಡಬಾರದು ಎಂದು ಕವಿಂದರ್ ಹೇಳಿದ್ದಾರೆ.ಈಗಾಗಲೇ ಬಿಜೆಪಿ ಈ ಪ್ರಕರಣದಲ್ಲಿ ವಿಪಕ್ಷಗಳಿಂದ ಟೀಕೆಗೆ