ಡೆಹ್ರಾಡೂನ್ : ಕೇದಾರನಾಥ ಯಾತ್ರೆ ಇಂದಿನಿಂದ (ಮಂಗಳವಾರ) ಆರಂಭವಾಗಿದ್ದು, ಕೇದಾರನಾಥ ಧಾಮದ ಬಾಗಿಲು ಯಾತ್ರಾರ್ಥಿಗಳಿಗೆ ತೆರೆದಿದೆ. ಶ್ಲೋಕಗಳ ಪಠ, ವಾದ್ಯಗಳ ಗಾಯನದೊಂದಿಗೆ ಇಂದು ಕೇದಾರನಾಥ ಧಾಮದ ಬಾಗಿಲು ತೆರೆಯಿತು. ಯಾತ್ರಾರ್ಥಿಗಳು ಸಂಭ್ರಮದಿಂದ ದೇವಾಲಯ ಪ್ರವೇಶಿಸುತ್ತಿದ್ದಾರೆ. ದಿನವೊಂದಕ್ಕೆ 13 ಸಾವಿರ ಯಾತ್ರಾರ್ಥಿಗಳಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗುವುದು. ಆದಾಗ್ಯೂ, ಯಾತ್ರಾ ಮಾರ್ಗದಲ್ಲಿ ಭಾರೀ ಹಿಮಪಾತ ಮತ್ತು ಹವಾಮಾನ ಇಲಾಖೆಯಿಂದ ಬಂದಿರುವ ಪ್ರತಿಕೂಲ ಹವಾಮಾನದ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರಾಖಂಡ ಸರ್ಕಾರ ಕೇದಾರನಾಥ ಧಾಮ