ನವದೆಹಲಿ: ರಾಜಕೀಯಕ್ಕೆ ಧುಮುಕಲು ಬಯಸಿರುವ ಕಮಲ್ ಹಾಸನ್ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪರಸ್ಪರ ಭೇಟಿಯಾಗುತ್ತಿರುವುದು ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.ತಮಿಳು ನಟ ಕಮಲ್ ಹಾಸನ್ ಈಗಾಗಲೇ ಸ್ವಂತ ಪಕ್ಷ ಸ್ಥಾಪಿಸುವುದಾಗಿ ಹೇಳಿಕೊಂಡಿದ್ದರು. ಅಲ್ಲದೆ, ಸೆಪ್ಟೆಂಬರ್ ಕೊನೆಯ ವಾರ ಅಥವಾ ದೀಪಾವಳಿ ವೇಳೆಗೆ ಹೊಸ ಪಕ್ಷದ ಘೋಷಣೆ ಮಾಡುತ್ತಾರೆಂದು ಮೂಲಗಳಿಂದ ತಿಳಿದು ಬಂದಿತ್ತು. ಈ ಹಿನ್ನಲೆಯಲ್ಲಿ ಈ ಇಬ್ಬರೂ ನಾಯಕರು ಜತೆಗೇ ಭೋಜನ ಕೂಟ ನಡೆಸಲಿರುವುದು ಸಾಕಷ್ಟು ಕುತೂಹಲ