Widgets Magazine

ಲವ್ ಜಿಹಾದ್ ಇರೋದು ಸತ್ಯ ಎಂದ ಕೇರಳ ಬಿಷಪ್ ಒಕ್ಕೂಟ

ತಿರುವನಂತಪುರಂ| Krishnaveni K| Last Modified ಗುರುವಾರ, 16 ಜನವರಿ 2020 (09:47 IST)
ತಿರುವನಂತಪುರಂ: ಇಷ್ಟು ದಿನ ಕೇವಲ ಹಿಂದೂ ಸಂಘಟನೆಗಳು ಆರೋಪ ಮಾಡುತ್ತಿದ್ದ ಲವ್ ಜಿಹಾದ್ ಇರುವಿಕೆ ಬಗ್ಗೆ ಇದೀಗ ಕೇರಳದ ಕ್ಯಾಥೋಲಿಕ್ ಚರ್ಚ್ ಬಿಷಪ್ ಗಳ ಒಕ್ಕೂಟ ಕೂಡಾ ಧ್ವನಿ ಎತ್ತಿದೆ.

 
ಕೇರಳದಲ್ಲಿ ಹಿಂದೂ ಯುವತಿಯರನ್ನು ಪ್ರೀತಿ, ಪ್ರೇಮದ ಹೆಸರಿನಲ್ಲಿ ಮತಾಂತರ ಮಾಡಲಾಗುತ್ತಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸುತ್ತಲೇ ಇದ್ದವು. ಆದರೆ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.
 
ಇದೀಗ ಕೇರಳದ ಕ್ಯಾಥೋಲಿಕ್ ಬಿಷಪ್ ಗಳು ನಮ್ಮ ಸಮುದಾಯದ ಯುವತಿಯರನ್ನು ಉಗ್ರ ಸಂಘಟನೆ ಐಸಿಸ್ ಗೆ ಸೇರ್ಪಡೆಗೊಳಿಸಲು ಲವ್ ಜಿಹಾದ್ ನೆಪದಲ್ಲಿ ಮನ ಒಲಿಸಲಾಗುತ್ತಿದೆ. ಆದರೆ ಇದನ್ನು ಕೇರಳ ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದೆ. ಬಿಷಪ್ ಗಳ ಈ ಹೇಳಿಕೆಯನ್ನು ವಿಶ್ವ ಹಿಂದೂ ಪರಿಷತ್ ಕೂಡಾ ಸ್ವಾಗತಿಸಿದೆ.
ಇದರಲ್ಲಿ ಇನ್ನಷ್ಟು ಓದಿ :