ಕೊರೋನಾ ಬಾಧಿತ ಕೇರಳಕ್ಕೆ ಈಗ ತೌಕ್ತೆ ಚಂಡಮಾರುತದಿಂದ ವಿನಾಶ ಭೀತಿ

ತಿರುವನಂತಪುರಂ| Krishnaveni K| Last Modified ಭಾನುವಾರ, 16 ಮೇ 2021 (09:23 IST)
ತಿರುವನಂತಪುರಂ: ಕೊರೋನಾದಿಂದಾಗಿ ನಲುಗಿದ್ದ ಕೇರಳಕ್ಕೆ ಈಗ ತೌಕ್ತೆ ಚಂಡಮಾರುತದ ಭೀತಿ ಎದುರಾಗಿದೆ. ಚಂಡಮಾರುತದ ಪರಿಣಾಮ ಕೇರಳ ಕರಾವಳಿಯ ಜನ ಭೀತಿಯಲ್ಲಿದ್ದಾರೆ.
 > ಕೇರಳದಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದ್ದು, ಕರ್ನಾಟಕದ ತೀರ ಭಾಗದಲ್ಲೂ ಇದರ ಪ್ರಭಾವ ಕಂಡುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ಕಡಲಬ್ಬರ ಹೆಚ್ಚಾಗಿದೆ.>   ಕಡಲ ತಡಿಯಲ್ಲಿ ಕೆಲವು ಮನೆ, ಆಸ್ತಿ ಪಾಸ್ತಿಗಳು ನಷ್ಟವಾಗಿದೆ. ಭಾರೀ ಗಾತ್ರ ಅಲೆ ಉದ್ಭವವಾಗುತ್ತಿದ್ದು, ಪ್ರಾಣ ಉಳಿಸಿಕೊಳ್ಳಲು ತೀರ ಪ್ರದೇಶದ ಜನ ಬೇರೆಡೆ ವಲಸೆ ಹೋಗುವಂತಾಗಿದೆ.ಇದರಲ್ಲಿ ಇನ್ನಷ್ಟು ಓದಿ :