ಮುಂಬೈ (ಆ,27) : ಅಕ್ಟೋಬರ್ ತಿಂಗಳ ಅಂತ್ಯದ ವೇಳೆಗೆ ದೇಶದ ಆರ್ಥಿಕ ರಾಜಧಾನಿ ಮಹಾರಾಷ್ಟ್ರಕ್ಕೆ ಕೋವಿಡ್ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ. ಈ ವೇಳೆ ಕನಿಷ್ಟ 60 ಲಕ್ಷ ಜನ ಮಾರಕ ಕೊರೋನಾ ವೈರಸ್ಗೆ ತುತ್ತಾಗಲಿದ್ದಾರೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದ ವೇಳೆಗೆ ಬಹುತೇಕ ಎಲ್ಲಾ ಹಬ್ಬಗಳು ಮುಗಿಯುವ ಸಮಯವಾಗಿದ್ದು, ಈ ವೇಳೆಗೆ ಹೆಚ್ಚಿನ ಜನ ಕೊರೋನಾ