ಪಾಕಿಸ್ತಾನದ ಕಲಾವಿದರು ಉಗ್ರರಲ್ಲ ಎಂಬ ಸಲ್ಮಾನ್ ಹೇಳಿಕೆಗೆ ಕಿಡಿಕಾರಿರುವ ವಿಹೆಚ್ಪಿ ನಾಯಕಿ ಸಾಧ್ವಿ ಪ್ರಾಚಿ, ಪಾಕ್ ಕಲಾವಿದರು ತಮ್ಮ ಕಲೆಯನ್ನು ತಮ್ಮ ದೇಶದಲ್ಲಿಯೇ ತೋರಿಸಿಕೊಳ್ಳಲಿ. ಈ ಕಲಾವಿದರ ಬಗ್ಗೆ ಸಲ್ಮಾನ್, ಶಾರುಖ್, ಅಮಿರ್ ಖಾನ್ ಸಹಿತ ಇತರ ಯಾರಿಗಾದರೂ ಸಹಾನುಭೂತಿ ಇದ್ದರೆ ಅವರು ಕೂಡ ಪಾಕಿಸ್ತಾನಕ್ಕೆ ಹೋಗಲಿ. ನಮ್ಮ ದೇಶದ ಅನ್ನ ತಿಂದು ಪಾಕಿಸ್ತಾನದ ಬಗ್ಗೆ ಅನುಕಂಪ ಸಲ್ಲದು ಎಂದು ಗುಡುಗಿದ್ದಾರೆ. ಪಾಕಿಸ್ತಾನ ಕಲಾವಿದರಿಗೆ ಭಾರತದಲ್ಲಿ ನಿಷೇಧ ಹೇರಿರುವುದಕ್ಕೆ ಪ್ರತಿಕ್ರಿಯಿಸಿದ್ದ