ತಿರುವನಂತಪುರಂ : ವ್ಯಕ್ತಿಯೊಬ್ಬ ತನ್ನ ಸ್ವಂತ ತಾಯಿಯೊಂದಿಗೆ ಜಗಳವಾಡಿ ಕೋಪದಲ್ಲಿ ಗೋಡೆಗೆ ಬಡಿದು ಕೊಂದಿರುವ ಘಟನೆ ಕೊಚ್ಚಿಯ ಮುವಾಟ್ಟುಪುಳದ ಪಲ್ಲಿಚಿರಂಗರಾದಲ್ಲಿ ನಡೆದಿದೆ. ಆರೋಪಿ ಮನೋಜ್(46) ತನ್ನ ತಾಯಿ ಶಾಂತಮ್ಮ ನೆರೆಹೊರೆಯವರ ಮುಂದೆ ತನ್ನ ಬಗ್ಗೆ ಅನಗತ್ಯ ವಿಚಾರಗಳನ್ನು ಹೇಳುತ್ತಿರುತ್ತಾರೆ ಎಂಬ ಕಾರಣಕ್ಕೆ ಜಗಳವಾಡಿ ಹತ್ಯೆ ಮಾಡಿದ್ದಾನೆ. ಫೆಬ್ರವರಿ 5 ರ ರಾತ್ರಿ ಮನೋಜ್ ತಾಯಿ ಶಾಂತಮ್ಮ ಅವರ ಮೇಲೆ ಕೋಪಗೊಂಡು ಜಗಳ ಪ್ರಾರಂಭಿಸಿದ್ದಾನೆ. ತಾಯಿ-ಮಗನ ನಡುವಿನ ಜಗಳ ವಿಕೋಪಕ್ಕೆ ತಿರುಗಿತ್ತು.