ನವದೆಹಲಿ: ಪ್ರಧಾನಿ ಮೋದಿ ಸಂಪುಟದಲ್ಲಿ ಈ ಬಾರಿ ವಿದೇಶಾಂಗ ಸಚಿವರಾಗಿ ಸುಬ್ರಹ್ಮಣ್ಯಂ ಜೈಶಂಕರ್ ಅವರಿಗೆ ಮಣೆ ಹಾಕಲಾಗಿದೆ. ಇದುವರೆಗೆ ಈ ಹೆಸರು ಅಷ್ಟೊಂದು ಪರಿಚಿತವಾಗಿರಲಿಲ್ಲ. ಇದ್ದಕ್ಕಿದ್ದ ಹಾಗೆ ಜೈಶಂಕರ್ ಹೆಸರು ಕೇಳಿಬಂದಾಗ ಅವರು ಯಾರು ಎಂಬ ಕುತೂಹಲ ಬಂದೇ ಬರುತ್ತದೆ.ಅದೂ ನಮ್ಮ ದೇಶದ ವಿದೇಶಾಂಗ ಸಚಿವರ ಬಗ್ಗೆ ನಮಗೆ ಗೊತ್ತಿರಲೇಬೇಕಲ್ಲವೇ? ಇಷ್ಟೊಂದು ಪ್ರಭಾವಿ ಖಾತೆಯನ್ನು ಮೋದಿ ಜೈಶಂಕರ್ ಹೆಗಲಿಗೇರಿಸಲು ಕಾರಣವೇನು ಗೊತ್ತಾ?ದೆಹಲಿ ಮೂಲದ ಜೈಶಂಕರ್ ಮೂಲತಃ ಅಮೆರಿಕಾದಲ್ಲಿ ಭಾರತೀಯ ರಾಯಭಾರಿಯಾಗಿ,