ಚೆನ್ನೈ : ಕೋವಿಡ್-19 ಸೋಂಕಿಗೆ ಹೆದರಿ ಕುಟುಂಬದ ಸದಸ್ಯರೊಂದಿಗೆ ವಿಷ ಸೇವಿಸಿದ ತಾಯಿ ಹಾಗೂ ಆಕೆಯ 3 ವರ್ಷದ ಮಗು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ನಡೆದಿದೆ.ಸೋಂಕಿನ ಭಯದಿಂದ ಮಹಿಳೆ, ಆಕೆಯ ತಾಯಿ ಹಾಗೂ ಸಹೋದರರು ಸೇರಿದಂತೆ ಕುಟುಂಬದ 5 ಜನರು ವಿಷ ಸೇವಿಸಿದ್ದಾರೆ. ವಿಷ ಸೇವಿಸಿದವರಲ್ಲಿ ಮೂವರು ಬದುಕುಳಿದಿದ್ದು, ಮಹಿಳೆ ಹಾಗೂ ಆಕೆಯ ಕಂದಮ್ಮ ಸಾವನ್ನಪ್ಪಿದ್ದಾರೆ.ಮೃತ ಮಹಿಳೆ ಜ್ಯೋತಿಕಾ(23)ಳ ತಂದೆ 2021ರ ಡಿಸೆಂಬರ್ ತಿಂಗಳಿನಲ್ಲಿ ಸಹಜ ಸಾವನ್ನಪ್ಪಿದ್ದರು.