ಲೇಡಿ ಕಾನ್ಸ್ ಟೇಬಲ್ ಸುಳ್ಳು ಕಿರುಕುಳದ ಆರೋಪಕ್ಕೆ ಬಲಿಯಾಯ್ತು ಯುವಕನ ಜೀವ

ಲಕ್ನೋ| pavithra| Last Modified ಸೋಮವಾರ, 23 ನವೆಂಬರ್ 2020 (07:10 IST)
ಲಕ್ನೋ : ತನ್ನ ಮೇಲೆ ಲೇಡಿ ಕಾನ್ಸ್ ಟೇಬಲ್ ಸುಳ್ಳು ಕಿರುಕುಳದ ಆರೋಪ ದಾಖಲಿಸಿ ಥಳಿಸಿದ್ದರಿಂದ ನೊಂದ 25 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಹರ್ಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಲೇಡಿ ಕಾನ್ಸ್ ಟೇಬಲ್ ನಿಂತಿದ್ದ ವೇಳೆ ಪರಿಚಯಸ್ಥಳಾದ ಕಾರಣ ಯುವಕ ಲಿಫ್ಟ್ ಬೇಕಾ ಎಂದು ಕೇಳಿದ್ದಾನೆ. ಇದರಿಂದ ಕೋಪಗೊಂಡ ಲೇಡಿ ಕಾನ್ಸ್ ಟೇಬಲ್ ಆತನ ಕಪಾಳಕ್ಕೆ ಹೊಡೆದು ಪೊಲೀಸರಿಗೆ ಒಪ್ಪಿಸಿದ್ದಾಳೆ. ಆತನನ್ನು ಥಳಿಸಿದ ಪೊಲೀಸರು ಬಳಿಕ ಅವನನ್ನು ಹೊರಗೆ ಕಳುಹಿಸಿದ್ದಾರೆ.

ಈ ಘಟನೆಯಿಂದ ನೊಂದ ಯುವಕ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :