ಆರ್ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಬಿಹಾರದ ಮಾಜಿ ಸಿಎಂ ಆಗಿರುವ ಲಾಲೂ ಪ್ರಸಾದ್ ಯಾದವ್, ಬಹುಕೋಟಿ ಮೇವು ಹಗರಣ ಕೇಸ್ ನಲ್ಲಿ ಜೈಲುಪಾಲಾಗಿದ್ದರು.ಜಾರ್ಖಂಡ್ ಹೈಕೋರ್ಟ್ ಯಾದವ್ ಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.ಸಿಎಂ ಆಗಿದ್ದಾಗ ಚೈಬಾಸ್ ಖಜಾನೆಯಿಂದ 33.67 ಕೋಟಿ ರೂ.ಗಳನ್ನು ವಂಚಿಸಿರುವ ಕೇಸ್ ನಲ್ಲಿ ಜಾಮೀನು ಮಂಜೂರು ಆಗಿದೆ.