ನವದೆಹಲಿ: ಬಹುಕೋಟಿ ಮೇವು ಹಗರಣದ ಆರೋಪದಲ್ಲಿ ಜೈಲು ಪಾಲಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಖಿನ್ನತೆಯಿಂದ ಬಳಲುತ್ತಿದ್ದಾರಂತೆ! ಹಾಗಂತ ಸದ್ಯಕ್ಕೆ ಅವರು ಚಿಕಿತ್ಸೆ ಪಡೆಯುತ್ತಿರುವ ರಾಂಚಿಯ ವೈದ್ಯಕೀಯ ಕಾಲೇಜು ಆಸ್ಪತ್ರೆ (ರಿಮ್ಸ್)ಯ ವೈದ್ಯರು ವರದಿ ನೀಡಿದ್ದಾರೆ.ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲೂ ಇತ್ತೀಚೆಗಷ್ಟೇ ತಮ್ಮ ಕೊಠಡಿಯಲ್ಲಿ ಶುಚಿತ್ವ ಇಲ್ಲ, ಸೊಳ್ಳೆ ಕಾಟ ವಿಪರೀತ ಎಂದು ಕೊಠಡಿ ಬದಲಾಯಿಸುವಂತೆ ವೈದ್ಯರಿಗೆ ಮನವಿ ಮಾಡಿ ಸುದ್ದಿಯಾಗಿದ್ದರು.ಇದೀಗ