ಪಾಕಿಸ್ತಾನ ಗೆದ್ದಿದ್ದಕ್ಕೆ ಸಂಭ್ರಮಾಚರಣೆ ಮಾಡಿದ್ದ ಯುವಕನ ಪರ ವಕಾಲತ್ತು ವಹಿಸಲು ವಕೀಲರ ನಕಾರ

ಡೆಹ್ರಾಡೂನ್| venu| Last Modified ಭಾನುವಾರ, 25 ಜೂನ್ 2017 (11:14 IST)
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ಸೋತಾಗ ಹಲವು ಕಿಡಿಗೇಡಿಗಳು ಭಾರತದಲ್ಲೇ ಇದ್ದುಕೊಂಡು ಪಾಕಿಸ್ತಾನ ಗೆದ್ದದ್ದಕ್ಕೆ ಸಂಭ್ರಮಾಚರಣೆ ಮಾಡಿರುವುದು ಬೆಳಕಿಗೆ ಬಂದಿದೆ. ಉತ್ತರಾಖಂಡ್`ನ ಹರಿದ್ವಾರದ ರೂರ್ಕಿಯಲ್ಲೂ ಫೇಸ್ಬುಕ್`ನಲ್ಲಿ ಪಾಕಿಸ್ತಾನಕ್ಕೆ ಅಭಿನಂದಿಸುವ ತಿಳಿಸುವ ಪೋಸ್ಟ್ ಹಾಕಿ ಬಂಧಿತನಾಗಿರುವ ಯುವಕನ ಪರ ವಕಾಲತ್ತು ವಹಿಸದಿರಲೂ ವಕೀಲರು ಅವಿರೋಧವಾಗಿ ನಿರ್ಧರಿಸಿದ್ದಾರೆ.

ಪಾಕಿಸ್ತಾನಕ್ಕೆ ಅಭಿನಂದನೆ ತಿಳಿಸಿದ ಶದಾಬ್ ಹಸನ್ ಪೋಸ್ಟ್ ದೇಶ ವಿರೋಧಿ ಕೃತ್ಯ.ಆತನಿಗೆ ವಕಾಲತ್ತು ವಹಿಸದಿರಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಲಕ್ಸಾರ್ ಅಡ್ವೋಕೇಟ್ ಅಸೋಸಿಯೇಶನ್ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ವಕೀಲರ ನಿರ್ಧಾರದ ಬಳಿಕ ಶದಾಬ್ ಸಂಬಂಧಿಕರು ಭಯಭೀತರಾಗಿದ್ದು, ಯಾರೊಬ್ಬರೂ ವಕಾಲತ್ತು ವಹಿಸದಿದ್ದರೆ ಶದಾಬ್ ದೀರ್ಘಕಾಲ ಜೈಲಿನಲ್ಲಿಯೇ ಇರಬೇಕಾಗುತ್ತದೆ ಎಂಬ ಆತಂಕ ವ್ಯಪಡಿಸಿದ್ದಾರೆ. ಅಲ್ಲದೇ, ಯಾರೋಬ್ಬರೂ ವಕಾಲತ್ತು ವಹಿಸದಿದ್ದರೆ ಸರ್ಕಾರಿ ವಕೀಲರನ್ನ ನೇಮಿಸುವಂತೆ ನ್ಯಾಯಾಲಯವನ್ ಕೋರುವುದಾಗಿ ಹೇಳಿದ್ದಾರೆ.

ಸ್ಥಳೀಯ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮೋಹಿತ್ ವರ್ಮಾ ದೂರಿನ ಮೇಲೆ ಪೊಲೀಸರು ಶದಾಬ್`ನನ್ನ ಬಂಧಿಸಿ ಕೋರ್ಟ್`ಗೆ ಹಾಜರುಪಡಿಸಿದ್ದರು. ಸದ್ಯ, ಶದಾಬ್`ನನ್ನ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ..

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ಸೋತಾಗ ಹಲವು ಕಿಡಿಗೇಡಿಗಳು ಭಾರತದಲ್ಲೇ ಇದ್ದುಕೊಂಡು ಪಾಕಿಸ್ತಾನ ಗೆದ್ದದ್ದಕ್ಕೆ ಸಂಭ್ರಮಾಚರಣೆ ಮಾಡಿರುವುದು ಬೆಳಕಿಗೆ ಬಂದಿದೆ. ಉತ್ತರಾಖಂಡ್`ನ ಹರಿದ್ವಾರದ ರೂರ್ಕಿಯಲ್ಲೂ ಫೇಸ್ಬುಕ್`ನಲ್ಲಿ ಪಾಕಿಸ್ತಾನಕ್ಕೆ ಅಭಿನಂದಿಸುವ ತಿಳಿಸುವ ಪೋಸ್ಟ್ ಹಾಕಿ ಬಂಧಿತನಾಗಿರುವ ಯುವಕನ ಪರ ವಕಾಲತ್ತು ವಹಿಸದಿರಲೂ ವಕೀಲರು ಅವಿರೋಧವಾಗಿ ನಿರ್ಧರಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ಸೋತಾಗ ಹಲವು ಕಿಡಿಗೇಡಿಗಳು ಭಾರತದಲ್ಲೇ ಇದ್ದುಕೊಂಡು ಪಾಕಿಸ್ತಾನ ಗೆದ್ದದ್ದಕ್ಕೆ ಸಂಭ್ರಮಾಚರಣೆ ಮಾಡಿರುವುದು ಬೆಳಕಿಗೆ ಬಂದಿದೆ. ಉತ್ತರಾಖಂಡ್`ನ ಹರಿದ್ವಾರದ ರೂರ್ಕಿಯಲ್ಲೂ ಫೇಸ್ಬುಕ್`ನಲ್ಲಿ ಪಾಕಿಸ್ತಾನಕ್ಕೆ ಅಭಿನಂದಿಸುವ ತಿಳಿಸುವ ಪೋಸ್ಟ್ ಹಾಕಿ ಬಂಧಿತನಾಗಿರುವ ಯುವಕನ ಪರ ವಕಾಲತ್ತು ವಹಿಸದಿರಲೂ ವಕೀಲರು ಅವಿರೋಧವಾಗಿ ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :