ಸಂವಿಧಾನ ದಿನದ ವಿಶೇಷತೆ ತಿಳಿಯಿರಿ

ಬೆಂಗಳೂರು| Ramya kosira| Last Updated: ಶುಕ್ರವಾರ, 26 ನವೆಂಬರ್ 2021 (14:29 IST)
ಭಾರತವು ಇಂದು ಅಂದರೆ ಶುಕ್ರವಾರ (ನವೆಂಬರ್ 26) ಸಂವಿಧಾನ ದಿನವನ್ನು ಆಚರಿಸುತ್ತಿದೆ.
ಸಂವಿಧಾನದ ದಿನದ ಮಹತ್ವ, ಆಚರಣೆಯ ಹಿನ್ನೆಲೆ ಮತ್ತು ಉದ್ದೇಶ, ಇಂದು ದೇಶದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ನವೆಂಬರ್ 26, 1949 ರಂದು ಭಾರತದ ಸಂವಿಧಾನ ಸಭೆಯು ಔಪಚಾರಿಕವಾಗಿ ಅತ್ಯುನ್ನತ ಕಾನೂನು ದಾಖಲೆಯಾದ ಸಂವಿಧಾನವನ್ನು ಅಂಗೀಕರಿಸಿತು. ಆದ್ದರಿಂದಲೇ ಪ್ರತಿ ವರ್ಷ ನವೆಂಬರ್ 26 ರಂದು ಸಂವಿಧಾನದ ದಿನವನ್ನು ಆಚರಿಸಲಾಗುತ್ತದೆ. ಸಂವಿಧಾನವು ಅಧಿಕೃತವಾಗಿ ಜಾರಿಗೆ ಬಂದಿದ್ದು, ಜನವರಿ 26, 1950 ರಂದು. ಆ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ದೇಶದ ಯುವಜನರಿಗೆ ಸಂವಿಧಾನದ ಮೌಲ್ಯಗಳನ್ನು ತಿಳಿಸುವ ಉದ್ದೇಶದಿಂದ ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ. ಸಂವಿಧಾನ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ್ ಅವರು ಭಾರತೀಯ ನಾಗರಿಕರಿಗೆ ಸಂಬಂಧಿಸಿದ ಹಕ್ಕುಗಳು ಮತ್ತು ಕಾನೂನುಗಳನ್ನು ವಿವರಿಸುವ ಕಾನೂನು ದಾಖಲೆಯ ತಯಾರಿಕೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದರಿಂದ, ಈ ಆಚರಣೆಯನ್ನು ಅವರ ಪರಂಪರೆಗೆ ಗೌರವ ಸಲ್ಲಿಸುವಂತೆಯೂ ಕಾಣಬಹುದಾಗಿದೆ.
mygov.in ಸಂವಿಧಾನ ದಿನದ ಉದ್ದೇಶವನ್ನು ಮತ್ತಷ್ಟು ವಿವರಿಸುತ್ತಾ, “ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 19 ನವೆಂಬರ್ 2015 ರಂದು ಸಂವಿಧಾನದ ಮೌಲ್ಯಗಳನ್ನು ಪ್ರಜೆಗಳಿಗೆ ಮತ್ತಷ್ಟು ಪ್ರಚುರಪಡಿಸಲು ಪ್ರತಿ ವರ್ಷ ನವೆಂಬರ್ 26 ನೇ ತಾರೀಕಿನಂದು ‘ಸಂವಿಧಾನ ದಿನ’ ಎಂದು ಆಚರಿಸಲು ಭಾರತ ಸರ್ಕಾರಕ್ಕೆ ಸೂಚಿಸಿದೆ” ಎಂದು ಹೇಳಿದೆ.ಇದರಲ್ಲಿ ಇನ್ನಷ್ಟು ಓದಿ :