ಭಾರತದ ಬ್ಯಾಂಕ್ ಮತ್ತು ಕರೆನ್ಸಿಯನ್ನು ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಪೂರೈಕೆ ಜಾಲದ ಪ್ರಮುಖ ಭಾಗವಾಗಿ ಮಾಡುವ ಅವಶ್ಯಕತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.ಅಲ್ಲದೆ ಹಣಕಾಸು ಸಂಸ್ಥೆಗಳು ನಿರಂತರವಾಗಿ ಉತ್ತಮ ಹಣಕಾಸು ಮತ್ತು ಕಾರ್ಪೊರೆಟ್ ಆಡಳಿತಕ್ಕೆ ಒತ್ತು ನೀಡಬೇಕು ಎಂದು ಕರೆಕೊಟ್ಟಿದ್ದಾರೆ.ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೆಟ್ ಸಚಿವಾಲಯ ಹಮ್ಮಿಕೊಂಡಿರುವ ವಿಶೇಷ ಸಪ್ತಾಹ ಯೋಜನೆಗೆ ಸೋಮವಾರ ಇಲ್ಲಿ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ