ಯುವತಿಯೊಬ್ಬಳು ಯುವಕನಿಗೆ ಹೊಡೆಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಯುವಕನೊಬ್ಬ ಇನ್ಸ್ಟಾಗ್ರಾಮ್ ಮೂಲಕ ಮಹಿಳೆಯೊಂದಿಗೆ ಪರಿಚಯವಾಗಿದ್ದಾನೆ. ಅವನು ಮಹಿಳೆಯೊಂದಿಗೆ ಮಾತನಾಡುವಾಗಲೆಲ್ಲಾ, ನಾನೊಬ್ಬ ಶ್ರೀಮಂತ ವ್ಯಕ್ತಿ, ಕಾರು, ಬಂಗಲೆ ಮತ್ತು ಲಕ್ಷಾಂತರ ಕೋಟಿ ಹಣವಿದೆ ಎಂದು ಹೇಳಿದ್ದಾನೆ. ಇದನ್ನು ಮಹಿಳೆ ನಂಬಿ ಅವನನ್ನು ಪ್ರೀತಿಸುತ್ತಿದ್ದಳು. ತನ್ನ ಪ್ರಿಯಕರ ತುಂಬಾ ಶ್ರೀಮಂತ ವ್ಯಕ್ತಿ ಎಂದು ತಿಳಿದ ಯುವತಿ, ಪೋಷಕರು ನಿರ್ಧರಿಸಿದ್ದ ವರನೊಂದಿಗಿನ ವಿವಾಹವನ್ನು ತಿರಸ್ಕರಿಸಿ ತಾನು ಪ್ರೀತಿಸುತ್ತಿರುವ ಯುವಕನನ್ನೇ ವಿವಾಹವಾಗುವುದಾಗಿ ತಿಳಿಸಿದ್ದಾಳೆ.