ನವದೆಹಲಿ: ದಕ್ಷಿಣಭಾರತದಲ್ಲಿ ಓಖಿ ಚಂಡಮಾರುತಕ್ಕೆ ಸಿಲುಕಿ ಅನೇಕ ಸಾವು ನೋವುಗಳಾಗಿರುವುದನ್ನು ನಾವು ನೋಡಿದ್ದೇವೆ. ಚಂಡಮಾರುತದ ಪ್ರಭಾವದಿಂದ ಉಂಟಾದ ನಷ್ಟಗಳಿಂದ ಜನರು ಇನ್ನು ಚೇತರಿಸಿಕೊಂಡಿಲ್ಲ, ಅಷ್ಟರಲ್ಲೇ ಉತ್ತರ ಭಾರತದಲ್ಲಿ ಇನ್ನೊಂದು ಅಪಾಯದ ಮುನ್ಸೂಚನೆ ಕಾಣುತ್ತಿದೆ. ಅದೇನೆಂದರೆ ರಾಜಧಾನಿ ನವದೆಹಲಿಯಲ್ಲಿ ಲಘು ಭೂಕಂಪನ ಉಂಟಾಗಿದೆಯಂತೆ. ಬುಧವಾರ ರಾತ್ರಿ ನವದೆಹಲಿ, ನೋಯ್ಡಾ ಕೆಲವು ಭಾಗಗಳಲ್ಲಿ ಲಘು ಭೂಕಂಪನ ಉಂಟಾಗಿದ್ದು, ರಿಕ್ಟರ್ ಮಾಪನದಲ್ಲಿ ಅದರ ತೀವ್ರತೆ 5.5ರಷ್ಟಿತ್ತು ಎಂದು ಭಾರತೀಯ ಭೂ ವಿಜ್ಞಾನ ಇಲಾಖೆಯಿಂದ ತಿಳಿದು