ಬಿಹಾರ : ಸರ್ಕಾರದ ಬಹುಮತವನ್ನು ಸಾಬೀತುಪಡಿಸಿ ನಿತೀಶ್ ನೀಡಿದ್ದ ಮನವಿಪತ್ರವನ್ನು ಅಂಗೀಕರಿಸಿದ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದರು. ಆರ್ಜೆಡಿಯೊಂದಿಗಿನ ಮೈತ್ರಿ ಸರ್ಕಾರ ಹಾಗೂ ಐಎನ್ಡಿಐಎ ಒಕ್ಕೂಟದೊಂದಿಗೆ ಬಾಂಧವ್ಯ ಕಡಿದುಕೊಂಡು ಬಿಜೆಪಿ ಜೊತೆ ಕೈಜೋಡಿಸುತ್ತಿರುವ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಭಾನುವಾರ ಸಂಜೆ ಐದಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.