ಕೇರಳ ಸಂಸದ ಇ. ಅಹಮದ್ ಮರಣ ಹೊಂದಿದ ದಿನವೇ ಅದನ್ನ ಮರೆಮಾಚಿ ಬಜೆಟ್ ಮಂಡಿಸಿದ್ದೀರಾ ಎಂದು ಆರೋಪಿಸಿದ ಲೋಕಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸರ್ಕಾರವನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. `ಅಹಮದ್ ಅವರು ಮೃತಪಟ್ಟಿದ್ದರೂ ಅನಗತ್ಯವಾಗಿ ಅವರನ್ನ ವೆಂಟಿಲೇಟರಿನಲ್ಲಿ ಇಡಲಾಗಿತ್ತು. ಸಾವಿನ ಸತ್ಯವನ್ನ ಮುಚ್ಚಿಡಲು ಈ ಕೆಲಸ ಮಾಡಿದ್ದಾರೆ. ಹೀಗಾಗಿ, ಈ ಬಗ್ಗೆ ಸಂಸದೀಯ ಸಮಿತಿ ಸಭೆ ನಡೆಯಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ ಎಂದಿದ್ದಾರೆ.ಇದೇ ಸಂದರ್ಭ ನೋಟು ಅಮಾನ್ಯೀಕರಣ ವಿಷಯ ಪ್ರಸ್ತಾಪಿಸಿದ