ನವದೆಹಲಿ : ತಮಿಳಿನ ಖ್ಯಾತ ನಟ ಸೂರ್ಯ ಅಭಿನಯದ ಅಯನ್ ಸಿನಿಮಾದಲ್ಲಿರುವ ದೃಶ್ಯದಂತೆ ತಮ್ಮ ಹೊಟ್ಟೆಯೊಳಗೆ ಸುಮಾರು 28 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಅನ್ನು ಸಾಗಿಸುತ್ತಿದ್ದ ಇಬ್ಬರು ಚಾಲಾಕಿ ಮಹಿಳೆಯರು ಪೊಲೀಸರ ಬಲೆಗೆ ಬಿದ್ದಿದ್ದಾರೆ.ಉಗಾಂಡಾದಿಂದ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರ ಹೊಟ್ಟೆಯಲ್ಲಿ 181 ಕ್ಯಾಪ್ಸುಲ್ಗಳಲ್ಲಿ ಅಡಗಿಸಿಟ್ಟು ಸಾಗಿಸುತ್ತಿದ್ದ 28 ಕೋಟಿ ಮೌಲ್ಯದ ಕೊಕೇನ್ ಪತ್ತೆಯಾಗಿದ್ದು, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇಬ್ಬರು ಮಹಿಳೆಯರು ಸುಮಾರು 2 ಕೆಜಿ ಕೊಕೇನ್