ಜೈಪುರ : ಮದುವೆ ಸಮಾರಂಭದಲ್ಲಿ ಹಲ್ಲಿ ಬಿದ್ದಿದ್ದ ಮಜ್ಜಿಗೆ ಕುಡಿದು 16 ಮಂದಿ ಅಸ್ವಸ್ಥರಾಗಿರುವ ಘಟನೆ ಪಹಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಭರತ್ಪುರದ ಅಟಾವಿ ಗ್ರಾಮದಲ್ಲಿ ನಡೆದಿದೆ. ಅಸ್ವಸ್ಥಗೊಂಡ 16 ಮಂದಿಯಲ್ಲಿ ವಧು-ವರ ಸೇರಿದಂತೆ ಐವರು ಮಕ್ಕಳೂ ಸೇರಿದ್ದಾರೆ. ವಿವಾಹವಾದ ನಂತರ ವಧುವನ್ನು ಬೀಳ್ಕೊಡುವ ಸಂದರ್ಭದಲ್ಲಿ ಅಂದರೆ ಮೇ 22 ರಂದು ಈ ಘಟನೆ ನಡೆದಿದೆ.ಮದುವೆ ಮಂಟಪದಿಂದ ಹೊರಡುವ ಮುನ್ನ ನವದಂಪತಿಗೆ ಹಾಗೂ ಅವರೊಂದಿಗಿದ್ದ ಸಂಬಂಧಿಕರಿಗೆ ಮಜ್ಜಿಗೆ ಬಡಿಸಲಾಯಿತು.