ಕೊಚ್ಚಿ: ಹೋಟೆಲ್ ಮಾಲಿಕನಿಗೆ ವಂಚನೆ ಮಾಡಲು ಹೋಗಿ ಪ್ರೇಮಿಗಳು ಬಂಧನಕ್ಕೊಳಗಾದ ಘಟನೆ ಕೇರಳದಲ್ಲಿ ನಡೆದಿದೆ.ರಿಂಝೀನಾ ಮತ್ತು ಶಾಜಹಾನ್ ಎಂಬ ಇಬ್ಬರು ಪ್ರೇಮಿಗಳು ಕೊಚ್ಚಿಯ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದರು. ಬಳಿಕ ಹೋಟೆಲ್ ನಲ್ಲಿ ತಿಂದ ಆಹಾರದಿಂದ ತಮಗೆ ಅನಾರೋಗ್ಯವಾಗಿದೆ. ಈಗ ಆಸ್ಪತ್ರೆಗೆ ದಾಖಲಾಗಿದ್ದೇವೆ. ನಮಗೆ ಪರಿಹಾರ ಕೊಡಿ ಎಂದು ದಾವೆ ಹೂಡಿದ್ದಾರೆ.ಅದರಂತೆ ಅವರು ದಾಖಲಾಗಿದ್ದ ಆಸ್ಪತ್ರೆಗೆ ಹೋಟೆಲ್ ಮಾಲಿಕ ಹೋಗುತ್ತಿದ್ದಂತೇ ಹಲ್ಲೆ ನಡೆಸಿ ಆತನ ಬಳಿಯಿದ್ದ 11 ಸಾವಿರ ರೂ.ಗಳನ್ನು ಕಿತ್ತುಕೊಂಡಿದ್ದಾರೆ.