ನವದೆಹಲಿ: ಹೊಸ ವರ್ಷದ ಮೊದಲ ದಿನವೇ ಜನರಿಗೆ ತೈಲ ಕಂಪನಿಗಳು ಸಿಹಿ ಸುದ್ದಿ ನೀಡಿವೆ. ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆಯಾಗಿದೆ.19 ಕೆ.ಜಿ.ಯ ವಾಣಿಜ್ಯ ಸಿಲಿಂಡರ್ ಬೆಲೆ ಸುಮಾರು 4.50 ರೂ.ಗಳಷ್ಟು ಕಡಿತವಾಗಿದೆ. ಒಂದೊಂದು ನಗರದಲ್ಲಿ ವ್ಯತ್ಯಸ್ಥ ರೀತಿಯಲ್ಲಿ ಬೆಲೆ ಇಳಿಕೆಯಾಗಿದೆ.ದೆಹಲಿಯಲ್ಲಿ ಒಂದೂವರೆ ರೂಪಾಯಿಷ್ಟು ಇಳಿಕೆಯಾಗಿದ್ದು ಈ ಮೊದಲು 1,757 ರೂ. ಇದ್ದ ಬೆಲೆ ಈಗ 1,755.50 ರೂ.ಗೆ ಇಳಿಕೆಯಾಗಿದೆ. ಚೆನ್ನೈನಲ್ಲಿ ಸುಮಾರು 4.50 ರೂ.ರಷ್ಟು ಇಳಿಕೆಯಾಗಿದೆ.