ಚೆನ್ನೈ: ಕೊರೋನಾ ಎರಡನೇ ಅಲೆಯಿಂದಾಗಿ ಜನ ಇಷ್ಟೊಂದು ಸಂಕಷ್ಟಕ್ಕೀಡಾಗಲು ಚುನಾವಣಾ ಆಯೋಗವೇ ಕಾರಣ ಎಂದು ಮದ್ರಾಸ್ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಕೊರೋನಾ ಸಮಯದಲ್ಲೂ ಚುನಾವಣೆ ನಡೆಸಿ ಸಾವಿರಾರು ಜನರು ಪ್ರಚಾರದ ನೆಪದಲ್ಲಿ ಸೇರಲು ಬಿಟ್ಟಿದ್ದಕ್ಕೆ ಆಯೋಗದ ವಿರುದ್ಧ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.ಚುನಾವಣಾ ಆಯೋಗದ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿರುವ ಮದ್ರಾಸ್ ಹೈಕೋರ್ಟ್ ‘ನಿಮ್ಮ ಸಂಸ್ಥೆ ಏಕಾಂಗಿಯಾಗಿ