ಶಬರಿಮಲೆಗೆ ಭೇಟಿ ನೀಡುವ ಮಹಿಳೆಯರನ್ನು ಎರಡು ಪೀಸ್ ಮಾಡಬೇಕು ಎಂದವರು ಯಾರು ಗೊತ್ತೇ?!

ತಿರುವನಂತಪುರಂ| Krishnaveni K| Last Modified ಶನಿವಾರ, 13 ಅಕ್ಟೋಬರ್ 2018 (10:19 IST)
ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರೂ ಭೇಟಿ ನೀಡಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ ಕೇರಳದಲ್ಲಿ ಇದರ ಬಗ್ಗೆ ಪರ-ವಿರೋಧ ಚರ್ಚೆಗಳೂ
ಜೋರಾಗಿ ನಡೆದಿದೆ.ಇದರ ನಡುವೆ ಕಾರ್ಯಕ್ರಮವೊಂದರಲ್ಲಿ ಮಲಯಾಳಂ ನಟ ಕೊಲ್ಲಂ ತುಳಸಿ ಎಂಬವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡುವ ಮಹಿಳೆಯರನ್ನು ಎರಡು ಭಾಗ ಮಾಡಬೇಕು ಎಂದು ನಟ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಹಿಳೆಯರನ್ನು ಎರಡು ಭಾಗ ಮಾಡಿ ಒಂದನ್ನು ದೆಹಲಿಗೂ ಇನ್ನೊಂದು ಭಾಗವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಗೂ ಕಳುಹಿಸಬೇಕು ಎಂದು ಆಕ್ರೋಶಭರಿತ ಮಾತನಾಡಿದ್ದಾರೆ. ಇದೀಗ ವ್ಯಾಪಕ ವಿವಾದಕ್ಕೊಳಗಾಗುವ ಲಕ್ಷಣವಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :