ಸಾವಿರಾರು ಕೋಟಿ ಸಾಲ ಮಾಡಿಕೊಂಡು ಲಂಡನ್ನಿಗೆ ಪಲಾಯನಗೈದಿರುವ ಮದ್ಯ ದೊರೆ ವಿಜಯ್ ಮಲ್ಯ ಅವರ ರಾಜ್ಯಸಭಾ ಸದಸ್ಯತ್ವ ಸಹ ಕೈತಪ್ಪುವ ಸಾಧ್ಯತೆ ಇದೆ. ಈಗಾಗಲೇ ಅವರ ಪಾಸ್ಪೋರ್ಟ್ ಕೂಡ ರದ್ದಾಗಿದೆ. 9,431.65 ಕೋಟಿ ರೂಪಾಯಿ ಸಾಲ ಮಾಡಿಕೊಂಡು ಅದನ್ನು ಹಿಂತಿರುಗಿಸದೆ ವಿದೇಶಕ್ಕೆ ಹಾರಿರುವ ಮಲ್ಯ ಅವರ ರಾಜ್ಯಸಭಾ ಸದಸ್ಯತ್ವ ರದ್ದು ಮಾಡಲು ಹಿರಿಯ ಕಾಂಗ್ರೆಸ್ ನಾಯಕ, ಸಂಸದ ಕರಣ್ ಸಿಂಗ್ ನೇತೃತ್ವದ ರಾಜ್ಯಸಭಾ ನೀತಿ ಸಮಿತಿ ಒಮ್ಮತದ ನಿರ್ಧಾರ