Widgets Magazine

ರಾಜ್ಯಪಾಲರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ| pavithra| Last Updated: ಶುಕ್ರವಾರ, 15 ನವೆಂಬರ್ 2019 (14:09 IST)
ಕೋಲ್ಕತ್ತಾ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಿದ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಪರೋಕ್ಷವಾಗಿ ಭಗತ್ ಸಿಂಗ್ ಕೋಶಿಯಾರಿ  ವಿರುದ್ಧ ಕಿಡಿಕಾರಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿದ ಅವರು, ಕೆಲವು ನಾಮನಿರ್ದೇಶಿತ ವ್ಯಕ್ತಿಗಳು ತಮ್ಮ ಗಡಿಯನ್ನು ಮೀರಿದ್ದಾರೆ. ಅವರ ನಡೆ ಕೇಂದ್ರ ಸರ್ಕಾರವನ್ನು ಮೀರಿಸಬಾರದು. ಈ ಬಗ್ಗೆ ಎಚ್ಚರವಹಿಸಬೇಕು  ಎಂದು ಹೇಳಿದ್ದಾರೆ.


ಸಾಮಾನ್ಯವಾಗಿ ನಾನು ಸಾಂವಿಧಾನಿಕ ಹುದ್ದೆಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಕೆಲವು ಜನರು ಬಿಜೆಪಿ ಮುಖವಾಣಿಗಳಂತೆ ವರ್ತಿಸುತ್ತಿದ್ದಾರೆ. ನನ್ನ ರಾಜ್ಯದಲ್ಲೂ ಏನು ನಡೆಯುತ್ತಿದೆ ಎಂಬುದನ್ನು  ನೀವು ನೋಡಿದ್ದೀರಿ. ಅವರು ಸಂಯುಕ್ತ ಆಡಳಿತವನ್ನು ನಡೆಸಲು ಬಯಸುತ್ತಾರೆ ಎಂದು ಮಮತಾ ಬ್ಯಾನರ್ಜಿ ಅವರು ಪರೋಕ್ಷವಾಗಿ ರಾಜ್ಯಪಾಲರನ್ನು ಕುಟುಕಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :