ಸೋತರೂ ಬಂಗಾಳಕ್ಕೆ ಮಮತಾ ಬ್ಯಾನರ್ಜಿಯೇ ಮುಖ್ಯಮಂತ್ರಿ

ಕೋಲ್ಕೊತ್ತಾ| Krishnaveni K| Last Modified ಸೋಮವಾರ, 3 ಮೇ 2021 (10:06 IST)
ಕೋಲ್ಕೊತ್ತಾ: ಪಶ್ಚಿಮ ಬಂಗಾಲ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಪ್ರಚಂಡ ಬಹುತಮ ಗಳಿಸಿದರೂ, ನಾಯಕಿ ಮಮತಾ ಬ್ಯಾನರ್ಜಿ ತಮ್ಮ ಕ್ಷೇತ್ರದಲ್ಲಿ ಸೋತಿದ್ದಾರೆ. ಹಾಗಿದ್ದರೂ ಸಿಎಂ ಅಭ್ಯರ್ಥಿ ಅವರೇ ಆಗಲಿದ್ದಾರೆ.

 
ಚುನಾವಣೆಗೂ ಮೊದಲೇ ಟಿಎಂಸಿ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿತ್ತು ಎನ್ನಲಾಗಿದೆ. ಹೀಗಾಗಿ ಸ್ವ ಕ್ಷೇತ್ರದಲ್ಲಿ ಸೋತರೂ ಮಮತಾ ಬ್ಯಾನರ್ಜಿಯೇ ಪಶ್ಚಿಮ ಬಂಗಾಲಕ್ಕೆ ಸಿಎಂ ಆಗಲಿದ್ದಾರೆ.
 
ಇನ್ನು ಆರು ತಿಂಗಳ ಕಾಲ ಮಮತಾ ಸಿಎಂ ಆಗಿ ಅಧಿಕಾರ ನಡೆಸಬಹುದು. ಅದಾದ ಬಳಿಕ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕಾಣಬೇಕು. ಒಂದು ವೇಳೆ ಸೋತರೆ ಅವರು ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ.
ಇದರಲ್ಲಿ ಇನ್ನಷ್ಟು ಓದಿ :