Widgets Magazine

ಪ್ರಧಾನಿ ಮೋದಿ ಎದುರು ಮಮತಾಗೆ ಮುಖಭಂಗ

ನವದೆಹಲಿ| Krishnaveni| Last Modified ಸೋಮವಾರ, 30 ಅಕ್ಟೋಬರ್ 2017 (11:33 IST)
ನವದೆಹಲಿ: ಆಧಾರ್ ಲಿಂಕ್ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಪ. ಬಂಗಾಲದ ಸಿಎಂ ಮಮತಾ ಬ್ಯಾನರ್ಜಿಗೆ ಸುಪ್ರೀಂ ಕೋರ್ಟ್ ನಲ್ಲಿ ಮುಖಭಂಗವಾಗಿದೆ.
 
ಇತ್ತೀಚೆಗಷ್ಟೇ ತಮ್ಮ ಮೊಬೈಲ್ ಸಂಖ್ಯೆಗೆ ಯಾವುದೇ ಕಾರಣಕ್ಕೂ ಆಧಾರ್ ಲಿಂಕ್ ಮಾಡಲ್ಲ ಎಂದಿದ್ದ ಮಮತಾ ಬ್ಯಾನರ್ಜಿ ಈ ರೀತಿ ಆಧಾರ್ ಲಿಂಕ್ ಮಾಡುವ ಕೇಂದ್ರ ಸರ್ಕಾರದ ಕಡ್ಡಾಯ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಪ. ಬಂಗಾಲದ ಸರ್ಕಾರದ ಪರವಾಗಿ ಅರ್ಜಿ ಸಲ್ಲಿಸಿದ್ದರು.
 
ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಂಸತ್ತಿನಲ್ಲಿ ಪಾಸಾದ ಮಸೂದೆಗಳನ್ನು ರಾಜ್ಯ ಸರ್ಕಾರಗಳು ಪ್ರಶ್ನಿಸುವಂತಿಲ್ಲ ಎಂದು ಆದೇಶ ನೀಡಿದೆ. ಈ ಮೂಲಕ ಪ್ರಧಾನಿ ಮೋದಿ ವಿರುದ್ಧ ಸಿಡಿದೆದ್ದ ಮಮತಾಗೆ ಮುಖಭಂಗವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :