ಪತ್ನಿಯರನ್ನು ಗೆಳೆಯರೊಂದಿಗೆ ಹಂಚಿಕೊಂಡ ಪತಿ ಮಹಾಶಯರು ಅರೆಸ್ಟ್

ಕೇರಳ, ಸೋಮವಾರ, 29 ಏಪ್ರಿಲ್ 2019 (15:35 IST)

ಅಲ್ಫುಜಾ: ನಾಲ್ವರು ಗೆಳೆಯರು ತಮ್ಮ ಪತ್ನಿಯರನ್ನು ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು 25 ರಿಂದ 32 ವರ್ಷ ವಯಸ್ಸಿನವರಾಗಿದ್ದು ಅಲ್ಪುಜಾ ಮತ್ತು ಕೊಲ್ಲಂ ಜಿಲ್ಲೆಯವರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಯಾಮ್‌ಕೂಲಂ ಪೊಲೀಸ್ ಅಧಿಕಾರಿ ಸಿ.ಎಸ್.ಶರೋನ್ ಮಾತನಾಡಿ, 32 ವರ್ಷದ ಆರೋಪಿಯ ಪತ್ನಿ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
 
ಪತಿ ತನ್ನ ಸಾಮಾಜಿಕ ಜಾಲ ತಾಣದ ಶೇರ್‌ಚಾಟ್ ಗೆಳೆಯರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದಾನೆ. ನಾನು ಗೆಳೆಯರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದಲ್ಲಿ ಅವರ ಪತ್ನಿಯರು ನನ್ನದೊಂದಿಗೆ ಲೈಂಗಿಕ ಸುಖ ನೀಡುತ್ತಾರೆ ಎಂದು ಪತಿ ಹೇಳಿದ್ದಾಗಿ ದೂರಿನಲ್ಲಿ ತಿಳಿಸಿದ್ದಾಳೆ.
 
ನಾನು ಪತಿಯ ಕೋರಿಕೆಯನ್ನು ತಿರಸ್ಕರಿಸಿದಾಗ ವಿಚ್ಚೇದನ ನೀಡುವ ಬೆದರಿಕೆ ಹಾಕಿದ್ದಲ್ಲದೇ ದೈಹಿಕ ಹಿಂಸೆ ನೀಡಿದ್ದಾನೆ ಎಂದು ಮಾಹಿತಿ ನೀಡಿದ್ದಾಳೆ.
 
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಶೇರ್‌ಚಾಟ್‌‌ನಲ್ಲಿ ಆರೋಪಿಗೆ ಕೋಳಿಕ್ಕೋಡ್ ಜಿಲ್ಲೆಯ ನಿವಾಸಿಯ ಪರಿಚಯವಾಗಿತ್ತು. ನಂತರ ಕೋಳಿಕ್ಕೋಡ ನಿವಾಸಿ ಆರೋಪಿಯ ಮನೆಗೆ ಬಂದು ಆತನ ಪತ್ನಿಯೊಂದಿಗೆ ಲೈಂಗಿಕ ಸುಖ ಅನುಭವಿಸಿದ್ದ. ಇತರ ಇಬ್ಬರು ಗೆಳೆಯರು ಕೂಡಾ ತಮ್ಮ ಪತ್ನಿಯರನ್ನು ಅದಲು ಬದಲು ಮಾಡಿ ಲೈಂಗಿಕ ಸುಖ ಅನುಭವಿಸಿದ್ದರು.
 
ಆದರೆ, ಆರೋಪಿಗಳು ಕ್ರೂರತೆಯಿಂದ ನಡೆದುಕೊಂಡ ಹಿನ್ನೆಲೆಯಲ್ಲಿ ಅವರ ಪತ್ನಿಯರು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದಾರೆ.
 
ಇದರಿಂದ ಕೋಪಗೊಂಡು ದೈಹಿಕ ಹಿಂಸೆ ನೀಡಲು ಮುಂದಾದಾಗ ಮಹಿಳೆಯರು ಆರೋಪಿ ಪತಿಯಂದಿರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ ಪೊಲೀಸರು ಸೂಕ್ತ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯಡಿಯೂರಪ್ಪ ಈ ಜನ್ಮದಲ್ಲಿ ಸಿಎಂ ಆಗೋದಿಲ್ವಾ?

ಸಿಎಂ ಆಗುವ ಉಮೇದಿನಲ್ಲಿ ಬಿ.ಎಸ್.ಯಡಿಯೂರಪ್ಪ ಏನೇನೋ ಮಾತಾಡ್ತಾರೆ. ಅವರು ಹುಚ್ಚು ಮಾತುಗಳನ್ನು ...

news

ಹಗಲಲ್ಲೇ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದು ಏನನ್ನು?

ಕಳ್ಳರಿಗೆ ಅದು ಯಾವ ಪರಿ ಧೈರ್ಯವೋ ಗೊತ್ತಿಲ್ಲ. ಮನೆಯ ಬೀಗವನ್ನು ಹಾಡು ಹಗಲೇ ಮುರಿದಿದ್ದಾರೆ.

news

ಮತ್ತೆ ಭೀಕರ ಅನಾಹುತ: ದೇವರ ಪ್ರಸಾದ ಸೇವಿಸಿ 18 ಮಂದಿ ಗಂಭೀರ

ದೇವರ ಪ್ರಸಾದ ಸೇವಿಸಿದ್ದ ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ದೇವರ ಪ್ರಸಾದ ...

news

ಪೊಲೀಸ್ ಪೇದೆಯನ್ನೇ ಥಳಿಸಿದ ಕುಡುಕರು

ಕುಡಿದು ರಸ್ತೆಯ ಮೆಲೆ ಜಗಳವಾಡುತ್ತಿದ್ದವರನ್ನು ಬಿಡಿಸಲಿಕ್ಕೆ ಹೋದ ಪೊಲೀಸ್ ಪೇದೆಗೆ ಕುಡುಕರೇ ಥಳಿಸಿರುವ ...