ಇನ್ ಸ್ಟಾಗ್ರಾಂ ಬಳಸುವ ಅಪ್ರಾಪ್ತ ಯುವತಿಯರೇ ಈತನ ಟಾರ್ಗೆಟ್!

ಮುಂಬೈ| Krishnaveni K| Last Modified ಗುರುವಾರ, 10 ಸೆಪ್ಟಂಬರ್ 2020 (09:26 IST)
ಮುಂಬೈ: ಇನ್ ಸ್ಟಾಗ್ರಾಂ ಬಳಸುವ ಅಪ್ರಾಪ್ತ ಬಾಲಕಿಯರ ಖಾತೆಗಳನ್ನು ಹ್ಯಾಕ್ ಮಾಡಿ ಅವರನ್ನು ಅಶ್ಲೀಲ ಫೋಟೋ ಕಳುಹಿಸಲು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
 

20 ವರ್ಷ ಯುವಕ ಬಂಧಿತ. ಈತ ಬಾಲಕಿಯರ ಇನ್ ಸ್ಟಾಗ್ರಾಂ ಖಾತೆಗಳನ್ನು ಹ್ಯಾಕ್ ಮಾಡಿ ಅಶ್ಲೀಲ ಫೋಟೋ ಕಳುಹಿಸುವಂತೆ ಪೀಡಿಸುತ್ತಿದ್ದ. ಈತನ ಬಳಿ ಇಂತಹ 700 ಕ್ಕೂ ಹೆಚ್ಚು ಅಶ್ಲೀಲ ಫೋಟೋಗಳು ಪತ್ತೆಯಾಗಿತ್ತು ಎನ್ನಲಾಗಿದೆ. ಈ ಫೋಟೋಗಳನ್ನು ಈತ ಅಶ್ಲೀಲ ವೆಬ್ ಸೈಟ್ ಗಳಿಗೆ ಹಾಕುವ ಉದ್ದೇಶ ಹೊಂದಿದ್ದನೇ ಎಂಬ ಕುರಿತಾಗಿ ಈಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :