ಹೈದರಾಬಾದ್: ತ್ರಿವಳಿ ತಲಾಖ್ ಪದ್ಧತಿ ನಿಷೇಧ ಕುರಿತು ಚರ್ಚೆಗಳಾಗುತ್ತಿರುವಾಗಲೇ ಹೈದರಾಬಾದ್ ನಲ್ಲಿ ವ್ಯಕ್ತಿಯೊಬ್ಬನನ್ನು ಪೋಸ್ಟ್ ಕಾರ್ಡ್ ಮೂಲಕ ತಲಾಖ್ ನೀಡಿದ್ದಕ್ಕೆ ಬಂಧಿಸಲಾಗಿದೆ. ಪತ್ನಿಯ ದೂರಿನನ್ವಯ ತೆಲಂಗಾಣ ಪೊಲೀಸರು 38 ವರ್ಷದ ಹನೀಫ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಜವಳಿ ಅಂಗಡಿಯೊಂದರಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದನೆನ್ನಲಾಗಿದೆ. ಮದುವೆಯಾದ ಒಂದೇ ದಿನಕ್ಕೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುವುದಾಗಿ ನೆಪ ಹೇಳಿ ಮನೆಯಿಂದ ತಪ್ಪಿಸಿಕೊಂಡಿದ್ದ ಹನೀಫ್ ನಂತರ ಕಳೆದ ತಿಂಗಳು ಅಂಚೆ ಮೂಲಕ