ಪಾಟ್ನಾ: ಅತ್ಯಾಚಾರ ಮಾಡಲು ಬಂದ ದುರುಳನ ಕೃತ್ಯವನ್ನು ವಿರೋಧಿಸಿದ್ದಕ್ಕೆ ಪಾಪಿ ಮಹಿಳೆಯ ಕಣ್ಣು ಕಿತ್ತು, ಗಂಭೀರವಾಗಿ ಗಾಯಗೊಳಿಸಿದ ಘಟನೆ ಬಿಹಾರದಲ್ಲಿ ನಡೆದಿದೆ.ಆರೋಪಿಯನ್ನು ಈಗ ಅರೆಸ್ಟ್ ಮಾಡಲಾಗಿದೆ. ಮಗಳ ಜೊತೆ ಮನೆಯೊಳಗಿದ್ದಾಗ ಮಹಿಳೆಯನ್ನು ಬಲವಂತವಾಗಿ ಹೊರ ಕರೆತಂದ ಆರೋಪಿ ಮೊಹಮ್ಮದ್ ಶಮೀಮ್ ಎಂಬಾತ ಹಿತ್ತಲಿಗೆ ಎಳೆದೊಯ್ದು ಕೈ ಕಾಲು ಕಟ್ಟಿ ಹಾಕಿ ಅತ್ಯಾಚಾರ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಕೂಗಿಕೊಂಡಾಗ ಆಕೆಯ ಬಾಯಿಗೆ ಸೊಪ್ಪು ತುರುಕಿ ಬಾಯಿ ಮುಚ್ಚಿಸಲು ಯತ್ನಿಸಿದ್ದಾನೆ.ಆಗಲೂ