ಒಡಿಶ್ಶಾ: ಮಾಂತ್ರಿಕನ ಮಾತು ಕೇಳಿ ಮಗನೇ 70 ವರ್ಷದ ವೃದ್ಧ ತಂದೆಯನ್ನು ಮಾನವ ಬಲಿ ನೀಡಲು ಸಿದ್ಧನಾದ ಘಟನೆ ಒಡಿಶ್ಶಾದಲ್ಲಿ ನಡೆದಿದೆ.ಈ ಸಂಬಂಧ 35 ವರ್ಷದ ಪುತ್ರನನ್ನು ಬಂಧಿಸಲಾಗಿದೆ. ವೃದ್ಧನನ್ನು ಬಲಿ ಕೊಡಲು ಎಲ್ಲಾ ಸಿದ್ಧತೆ ನಡೆದಿತ್ತು. ಆದರೆ ಇದರ ಸುಳಿವು ಸಿಕ್ಕು ಸ್ಥಳೀಯರು ಆತನನ್ನು ರಕ್ಷಿಸಿದ್ದಾರೆ.ಇನ್ನು ಮಾಂತ್ರಿಕ ಬಲಿ ಕೊಡಲು ಕೊಡಲಿ ಬೀಸಿದ್ದು ಈ ವೇಳೆ ವೃದ್ಧನಿಗೆ ಗಾಯಗಳಾಗಿವೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.