ಅಹಮ್ಮದಾಬಾದ್: ತನ್ನನ್ನು ಬಿಟ್ಟು ಹೋದ ಬೇಸರದಲ್ಲಿ ಗುಜರಾತ್ ನ ವ್ಯಕ್ತಿಯೊಬ್ಬರು ಹೆಂಡತಿಯನ್ನು ತಬ್ಬಿಕೊಂಡು ಜಿಲೆಟಿನ್ ಸ್ಪೋಟಿಸಿಕೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.47 ವರ್ಷದ ವ್ಯಕ್ತಿ ತನ್ನನ್ನು ಬಿಟ್ಟು ಹೋಗಿದ್ದ ಹೆಂಡತಿಯ ಮನವೊಲಿಸಲು ಪ್ರಯತ್ನ ನಡೆಸಿದ್ದ. ಆದರೆ ಆಕೆ ಮತ್ತೆ ಗಂಡನ ಮನೆಗೆ ಬರಲು ನಿರಾಕರಿಸಿದ್ದಳು. ಇತ್ತ ಹೆಂಡತಿಯನ್ನೂ ಬಿಟ್ಟಿರಲಾರದೇ ಪತಿ ಬೇಸರಗೊಂಡಿದ್ದ.ಈ ಕಾರಣಕ್ಕೆ ಒಟ್ಟಾಗಿ ಸಾಯಲು ನಿರ್ಧರಿಸಿದ್ದ. ತನ್ನ ದೇಹಕ್ಕೆ ಸ್ಪೋಟಕ ತಂತಿ ಸುತ್ತಿಕೊಂಡು ಹೆಂಡತಿಯ ತವರು ಮನೆಗೆ ಹೋಗಿದ್ದ ವ್ಯಕ್ತಿ