ಹೈದರಾಬಾದ್ : ಮದುವೆಯಾಗುತ್ತಿಲ್ಲವೆಂದು ಗೂಗಲ್ ಸರ್ಚ್ ಮಾಡಿ ಯುವತಿಯೊಬ್ಬಳು 5 ಲಕ್ಷ ರೂ ಕಳೆದುಕೊಂಡ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಇನ್ನೂ ಮದುವೆಯಾಗದ ಯುವತಿಯೊಬ್ಬಳಿಗೆ ಮದುವೆಯ ಸಂಬಂಧಗಳೇ ಬರದದಿದ್ದಕ್ಕೆ ಆಕೆಯ ಮೇಲೆ ವಾಮಾಚಾರ ಪ್ರಯೋಗವಾಗಿದೆ, ಅದನ್ನು ತೆಗೆಸಬೇಕೆಂದು ಸಂಬಂಧಿಯೊಬ್ಬರು ಹೇಳಿದ್ದಾರೆ. ಇದನ್ನು ಕೇಳಿದ ಯುವತಿ ಗೂಗಲ್ ಸರ್ಚ್ ಮಾಡಿ ವಾಮಾಚಾರ ತೆಗೆದುಹಾಕುವ ವ್ಯಕ್ತಿಯೊಬ್ಬನ ಮಾಹಿತಿ ಕಲೆಹಾಕಿ ಆತನಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾಳೆ. ಇದನ್ನೇ ಬಂಡವಾಗಿಸಿಕೊಂಡ ಆತ ವಿಶೇಷ ಪೂಜೆ