ಗಾಳಿಮಾತು ಅತ್ಯಂತ ಅಪಾಯಕಾರಿಯಾದದ್ದು.. ಯಾರೋ ಸೃಷ್ಟಿಸುವ ತಲೆಬುಡವಿಲ್ಲದ ಊಹಾಪೋಹಗಳಿಗೆ ಜೀವಗಳೇ ಬಲಿಯಾಗುತ್ತವೆ. ಇದಕ್ಕೆ ಸಾಕ್ಷಿ ಮುಂಬೈನ ಈ ಪ್ರಕರಣ. ತಾಯಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ನೆರೆಮನೆಯವರು ಹಬ್ಬಿಸಿದ್ದ ಗಾಳಿಮಾತಿನಿಂದ ನೊಂದು 35 ವರ್ಷದ ವ್ಯಕ್ತಿಯೊಬ್ಬ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾನೆ. ಇದೀಗ, ರೇಹನ್(ಹೆಸರು ಬದಲಿಸಲಾಗಿದೆ)ನನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಅಂದಹಾಗೆ ಇದೇನು ಪ್ರಕರಣವೇನೂ ಅಲ್ಲ. ದೆಹಲಿಯ ಗಂಗಾರಾಮ್ ಅಸ್ಪತ್ರೆಗೆ ಇದೇ ರೀತಿಯ 4 ಪ್ರಕರಣಗಳು ಬಂದಿವೆ ಎಂದು ಹೇಳಲಾಗಿದೆ.