ಛತ್ತೀಸ್ ಘಡ: ತನ್ನ ಪ್ರೀತಿಯ ಹುಡುಗಿ ಮೇಲೆ ತನ್ನ ಕಣ್ಣೆದುರೇ ಇಬ್ಬರು ದುರುಳರು ಅತ್ಯಾಚಾರವೆಸಗಿದರು ಎಂದು ಮನನೊಂದು 21 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ.ಸೆಪ್ಟೆಂಬರ್ 1 ರಂದು ಕಟ್ಗೋಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಯುವಕ ಪ್ರೀತಿಸುತ್ತಿದ್ದ ಯುವತಿ ಮೇಲೆ ಇಬ್ಬರು ಕಾಮುಕರು ಅತ್ಯಾಚಾರವೆಸಗಿದ್ದರು. ಈ ಯುವಕ ಆತ್ಮಹತ್ಯೆ ಮಾಡಿದ ಪ್ರಕರಣದಲ್ಲಿ ಯುವತಿಯನ್ನು ವಿಚಾರಣೆಗೊಳಪಡಿಸುವಾಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.ಶಾಲೆಯೊಂದರ ಬಳಿ ಇಬ್ಬರೂ ಕುಳಿತಿದ್ದಾಗ