ನವದೆಹಲಿ: ಪರೋಲ್ ಮೇಲೆ ಹೊರಗೆ ಬಂದಿದ್ದ ಅಪರಾಧಿ ಮರಳಿ ಜೈಲಿಗೆ ಹೋಗುವುದನ್ನು ತಪ್ಪಿಸಲು ಸಾವಿನ ನಾಟಕವಾಡಿ ಪತ್ನಿ ಸಮೇತ ಬಂಧನಕ್ಕೊಳಗಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಸುದೇಶ್ ಕುಮಾರ್ ಎಂಬಾತ ಕೊಲೆ ಆರೋಪದಲ್ಲಿ ಜೈಲು ಪಾಲಾಗಿದ್ದ. ಕೆಲವು ದಿನಗಳ ಹಿಂದೆ ಪರೋಲ್ ಮೇಲೆ ಬಿಡುಗಡೆಯಾಗಿದ್ದ. ಆದರೆ ಮರಳಿ ಜೈಲಿಗೆ ಹೋಗುವುದನ್ನು ತಪ್ಪಿಸಲು ಪತ್ನಿಯ ಜೊತೆಗೂಡಿ ಸಾವಿನ ನಾಟಕವಾಡಿದ್ದ.ಅದಕ್ಕಾಗಿ ತನ್ನ ಮನೆಗೆ ಕೆಲಸಕ್ಕೆ ಬಂದಿದ್ದ ನೌಕರನಿಗೆ ತನ್ನದೇ ಡ್ರೆಸ್ ತೊಡಿಸಿ ಮದ್ಯ ಕೊಡಿಸಿ