ರೈಲಿನಲ್ಲಿ ಸೀಟು ಕೇಳಿದ್ದಕ್ಕೆ ಪ್ರಾಣವನ್ನೇ ತೆಗೆದರು!

ಪುಣೆ| Krishnaveni K| Last Modified ಶುಕ್ರವಾರ, 14 ಫೆಬ್ರವರಿ 2020 (09:46 IST)
ಪುಣೆ: ರೈಲು ಪ್ರಯಾಣ ಮಾಡುವಾಗ ಸ್ವಲ್ಪ ಸೀಟು ಅಡ್ಜಸ್ಟ್ ಮಾಡಿಕೊಳ್ಳಿ ಎಂದಿದ್ದಕ್ಕೆ ವ್ಯಕ್ತಿಯನ್ನೇ ಪ್ರಯಾಣಿಕರು ಸೇರಿಕೊಂಡು ಥಳಿದು ಕೊಂದ ಘಟನೆ ಮುಂಬೈ-ಲಾಥೂರ್-ಬೀದರ್ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ.

 
ಸಾಗರ್ ಮರ್ಕದ್ ಸಾವನ್ನಪ್ಪಿದ ವ್ಯಕ್ತಿ. ಈತ ತನ್ನ ಪತ್ನಿ ಮತ್ತು ಎರಡು ವರ್ಷದ ಪುತ್ರಿಯೊಂದಿಗೆ ರೈಲು ಹತ್ತಿದಾಗ ಭೋಗಿ ಭರ್ತಿಯಾಗಿತ್ತು. ಆದರೆ ಮಗುವನ್ನು ಎತ್ತಿಕೊಂಡು ತುಂಬಾ ಸಮಯ ನಿಲ್ಲುವುದು ಅಸಾಧ‍್ಯ ಎಂದು ಮಹಿಳೆಯೊಬ್ಬರ ಬಳಿ ಸ್ವಲ್ಪ ಸೀಟು ಕೊಡುವಂತೆ ಕೇಳಿದ್ದರು.
 
ಈ ವೇಳೆ ಮಹಿಳೆ ಸಾಗರ್ ನೊಂದಿಗೆ ವಾಗ್ವಾದ ನಡೆಸಿದ್ದು, ಇದು ವಿಕೋಪಕ್ಕೆ ತಿರುಗಿ ಮಹಿಳೆಯ ಜತೆಗಿದ್ದ ಇತರ ಮಹಿಳೆಯರು ಸೇರಿದಂತೆ 12 ಮಂದಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಇದರಿಂದಾಗಿ ತೀವ್ರ ಗಾಯಗೊಂಡ ಸಾಗರ್ ಸಾವನ್ನಪ್ಪಿದ್ದಾರೆ. ಇದೀಗ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :