ನವದೆಹಲಿ:ಗೋಮಾಂಸ ತೆಗೆದುಕೊಂಡು ಹೋಗುತ್ತಿದ್ದಾರೆಂದು ಆರೋಪಿಸಿ ಮೂರು ಮಂದಿಯ ಮೇಲೆ ಸಹ ಪ್ರಯಾಣಿಕರು ಹಲ್ಲೆ ನಡೆಸಿ, ರೈಲಿನಲ್ಲೆ ಆರಂಭವಾದ ಮಾರಾಮಾರಿ ಓರ್ವನ ಸಾವಿನಲ್ಲಿ ಅಂತ್ಯವಾದ ಘಟನೆ ಘಾಜಿಯಾಬಾದ್-ದೆಹಲಿ-ಮಥುರಾ ರೈಲಿನಲ್ಲಿ ನಡೆದಿದೆ. ಹರಿಯಾಣದ ವಲ್ಲಬ್ಘರ್ದ ನಿವಾಸಿ ಜುನೈದ್ ತನ್ನ ಇಬ್ಬರು ಸೋದರ ಸಂಬಂಧಿಗಳಾದ ಹಶೀಮ್ ಮತ್ತು ಶಕೀರ್ ಜತೆಗೆ ದೆಹಲಿಯ ಸದರ್ ಬಜಾರ್ನಲ್ಲಿ ಹಬ್ಬದ ಖರೀದಿ ಮುಗಿಸಿ ರೈಲಿನಲ್ಲಿ ಊರಿಗೆ ಮರಳುತ್ತಿದ್ದರು. ಓಖ್ಲಾ ನಿಲ್ದಾಣ ಸಮೀಪಿಸುತ್ತಿದ್ದ ವೇಳೆ ಆಸನಕ್ಕಾಗಿ ಈ ಮೂವರು