ಗುರ್ಗಾಂವ್: ಒಂದೂವರೆ ತಾಸಿನ ಅವಧಿಯಲ್ಲಿ ನಾಲ್ಕು ಜನರ ಜೀವ ತೆಗೆದ ಹಂತಕ ಕೊನೆಗೆ ಪೊಲೀಸರ ಮುಂದೆ ಹಾಜರಾಗಿ ಶರಣಾದ ಘಟನೆ ಗುರ್ಗಾಂವ್ ನಲ್ಲಿ ನಡೆದಿದೆ. ವಿಶೇಷವೆಂದರೆ ಹಂತಕ ಮಾಜಿ ಸೈನಿಕ ಎನ್ನಲಾಗಿದೆ. ಈತ ಒಂದೂವರೆ ಗಂಟೆ ಅವಧಿಯಲ್ಲಿ ಸೊಸೆ, ಮೊಮ್ಮಗಳು, ಬಾಡಿಗೆದಾರ ಮತ್ತು ಆತನ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಅಲ್ಲದೆ, ಬಾಡಿಗೆ ನಿವಾಸಿಗಳ ಇನ್ನೊಬ್ಬ ಪುತ್ರಿಯ ಮೇಲೂ ಹಲ್ಲೆ ನಡೆಸಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ತನ್ನ ಸೊಸೆ ಬಾಡಿಗೆದಾರನೊಂದಿಗೆ ಅಕ್ರಮ ಸಂಬಂಧ