ನವದೆಹಲಿ: ನಾಯಿಗಳ ಸ್ವಭಾವವೇ ಬೊಗಳುವುದು. ಆದರೆ ಇಲ್ಲೊಬ್ಬ ನಾಯಿಯ ಬೊಗಳುವಿಕೆಯಿಂದ ಕಿರಿ ಕಿರಿಯಾಗುತ್ತಿದೆಂದು ಕೊಲೆ ಮಾಡಿದ ಘಟನೆ ನಡೆದಿದೆ.ದೆಹಲಿಯಲ್ಲಿ ವ್ಯಕ್ತಿಯೋರ್ವ ಸದಾ ಬೊಗಳುತ್ತಿದ್ದ ಬೀದಿ ನಾಯಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಾಯಿಯ ಕಿರಿ ಕಿರಿ ತಾಳಲಾರದೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.ನಾಯಿ ಹಗಲು-ರಾತ್ರಿ ಸದಾ ಬೊಗಳುತ್ತಿತ್ತು. ಇದರಿಂದಾಗಿ ನೆಮ್ಮದಿಯಾಗಿ ಮನೆಯಲ್ಲಿ ಮಲಗಲೂ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅದನ್ನು ಚಾಕುವಿನಿಂದ ಇರಿದು ಕೊಂದಿರುವುದಾಗಿ ಹೇಳಿದ್ದಾನೆ. ಈ ಸಂಬಂಧ ದೆಹಲಿ ಪೊಲೀಸರು ಪ್ರಾಣಿಗಳ ಮೇಲಿನ ಕ್ರೌರ್ಯ