ಒಡಿಶಾ: ಒಂದು ಮದುವೆಯಾಗಿ ಏಗುವುದೇ ಕಷ್ಟ. ಅಂತಹದ್ದರಲ್ಲಿ ಈ ವ್ಯಕ್ತಿ ಏಳು ರಾಜ್ಯಗಳ 14 ಮಹಿಳೆಯರನ್ನು ಮದುವೆಯಾಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.ಈತನ ಮದುವೆ ಕಳ್ಳಾಟವನ್ನು 14 ನೇ ಪತ್ನಿ ಪತ್ತೆ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಳು. ಬೇರೆ ಬೇರೆ ರಾಜ್ಯಗಳ ಮಹಿಳೆಯರನ್ನು ಮದುವೆಯಾಗುವುದು ಅವರಲ್ಲಿದ್ದ ನಗ-ನಗದು ದೋಚಿ ಪರಾರಿಯಾಗುವುದನ್ನೇ ಈತ ಕಾಯಕ ಮಾಡಿಕೊಂಡಿದ್ದ.1982 ರಲ್ಲಿ ಮೊದಲ ಮದುವೆಯಾಗಿದ್ದ. ಈಗ ಈತನಿಗೆ 60 ವರ್ಷವಾಗಿದೆ. ವೈವಾಹಿಕ ಅಂಕಣದ ಮೂಲಕ ಯುವತಿಯರನ್ನು ವಂಚಿಸಿ