ಮನೆಗೆ ನುಗ್ಗಿ 14 ವರ್ಷದ ಬಾಲಕಿಯ ಶೀಲಕೆಡಿಸಿದ ದುರುಳ

ನವದೆಹಲಿ| Krishnaveni K| Last Modified ಸೋಮವಾರ, 11 ಜನವರಿ 2021 (10:18 IST)
ನವದೆಹಲಿ: ಇದ್ದಕ್ಕಿದ್ದಂತೆ ಮನೆಗೆ ನುಗ್ಗಿದ ನೆರೆಮನೆಯ ನಿವಾಸಿ ಗನ್ ತೋರಿಸಿ ಬೆದರಿಸಿ 14 ವರ್ಷದ ಬಾಲಕಿಯ ಶೀಲಕೆಡಿಸಿದ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
 

ರಾತ್ರಿ ವೇಳೆ ತನ್ನ ಸಹೋದರಿಯರ ಜೊತೆ ಮಲಗಿದ್ದ ಅಪ್ರಾಪ್ತೆಯನ್ನು ದುರುಳ ಮಾನಭಂಗ ಮಾಡಿದ್ದಾನೆ. ಬಾಲಕಿಯ ಅಳು ಕೇಳಿ ಧಾವಿಸಿ ಬಂದ ಮನೆಯವರಿಗೆ ವಿಚಾರ ತಿಳಿದುಬಂದಿದ್ದು, ತಕ್ಷಣವೇ ಆತನನ್ನು ಸೆರೆಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಕೃತ್ಯ ದೃಢಪಟ್ಟಿದೆ.
ಇದರಲ್ಲಿ ಇನ್ನಷ್ಟು ಓದಿ :