ಅಹಮ್ಮದಾಬಾದ್: 2018 ರಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ಅಹಮ್ಮದಾಬಾದ್ ನ ಗ್ರಾಮಾಂತರ ನ್ಯಾಯಾಲಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದೆ.ಆರೋಪಿ ತನ್ನ ತಂಗಿ ಬೇರೆ ಧರ್ಮದವನನ್ನು ಮದುವೆಯಾದಳೆಂಬ ಸಿಟ್ಟಿಗೆ ಮೂವರ ಸಾವಿಗೆ ಕಾರಣವಾಗಿದ್ದ. ಗರ್ಭಿಣಿಯಾಗಿದ್ದ ತಂಗಿ, ಆಕೆಯ ಗಂಡ, ಮತ್ತು ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನು ಕೊಂದಿದ್ದ.ಈ ಪ್ರಕರಣದ ಕೂಲಂಕುಷ ತನಿಖೆ ನಡೆಸಿದ ನ್ಯಾಯಾಲಯ ಇದೀಗ ಸಾಕ್ಷ್ಯಾಧಾರಗಳ ಆಧಾರದಲ್ಲಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದೆ.