Widgets Magazine

ಬೆಂಕಿ ಹಚ್ಚಿದ ಯುವಕನನ್ನು ತಬ್ಬಿ ಸಾವನ್ನಪ್ಪಿದ್ದ ಪ್ರೇಯಸಿ

ಹೈದರಾಬಾದ್| Krishnaveni K| Last Modified ಬುಧವಾರ, 14 ಅಕ್ಟೋಬರ್ 2020 (11:03 IST)
ಹೈದರಾಬಾದ್: ಭಗ್ನ ಪ್ರೇಮಿಯೊಬ್ಬ ತನ್ನ ಪ್ರೇಯಸಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕ್ರೌರ್ಯ ನಡೆಸಿದ್ದಾನೆ. ಇದರಿಂದ ಯುವಕ ಹಾಗೂ ಯುವತಿ ಇಬ್ಬರೂ ಸಾವನ್ನಪ್ಪಿದ್ದಾರೆ.

 
ಬೆಂಕಿ ಹಚ್ಚಿ ಓಡಲೆತ್ನಿಸದ ಯುವಕನನ್ನು ಯುವತಿ ತಬ್ಬಿಕೊಂಡಿದ್ದು, ಇಬ್ಬರಿಗೂ ಬೆಂಕಿ ತಗುಲಿದೆ. ಪರಿಣಾಮ ಇಬ್ಬರೂ ಬೆಂಕಿಗೆ ಆಹುತಿಯಾಗಿದ್ದಾರೆ. ಸಂತ್ರಸ್ತೆ ವೃತ್ತಿಯಲ್ಲಿ ನರ್ಸ್ ಆಗಿದ್ದಳು. ನಾಲ್ಕು ವರ್ಷದಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿ ಇತ್ತೀಚೆಗಷ್ಟೇ ಯುವಕನನ್ನು ನಿರಾಕರಿಸಿದ್ದಳು. ಇದರಿಂದ ಕೆರಳಿದ ಯುವಕ ಪ್ರೇಯಸಿಗೆ ಬೆಂಕಿ ಹಚ್ಚಿದ್ದಾನೆ. ತೀವ್ರ ಸುಟ್ಟಗಾಯಗಳಿಂದಾಗಿ ಇಬ್ಬರೂ ಸಾವನ್ನಪ್ಪಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :